ಪರ್ಷೆಡ್‍ಮಾಸ್ಟ 
	ಮಧ್ಯ ಚೆಕೊಸ್ಲವಾಕಿಯದಲ್ಲಿ ಪರ್ಷರಾಫ್ ಪಟ್ಟಣದ ಬಳಿ ಇರುವ ಒಂದು ಸಣ್ಣ ಹಳ್ಳಿ. ಪೂರ್ವ ಮತ್ತು ಮಧ್ಯ ಯೂರೋಪಿನಲ್ಲಿ ಬೆಳೆದು ಬಂದ ಉತ್ತರ ಶಿಲಾಯುಗದ (ಕ್ರಿ.ಪೂ. 75000-10000) ಸಂಸ್ಕøತಿಯ ಪ್ರಮುಖ ನೆಲೆ. ಫ್ರಾನ್ಸಿನ ಅರಿಗ್ನೇಷಿಯನ್ ಮತ್ತು ಮ್ಯಾಗ್ಡಲೇನಿಯನ್ ಸಂಸ್ಕøತಿಗಳಿಗೆ ಸಮಕಾಲೀನವಾದ್ದೆನ್ನಲಾಗಿದೆ. 1800ರಿಂದ ಇಲ್ಲಿ ನಡೆಸಲಾದ ಉತ್ಖನನದಲ್ಲಿ ಅನೇಕ ಅಂಶಗಳು ಪ್ರಕಟವಾಗಿವೆ. ಇಲ್ಲಿಯ ಚಿಪ್ಪು ಮೂಳೆಗಳ ಕುಪ್ಪೆಗಳಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ದೈತ್ಯಾಕಾರದ ಪ್ರಾಣಿಗಳ ಮೂಳೆಗಳು ದೊರೆತಿವೆ. ಆ ಕಾಲದ ಜನರು ಪ್ರಾಣಿಗಳ ಬೇಟೆಯಿಂದ ಜೀವಿಸುತ್ತಿದ್ದರೆಂಬುದು ಇದರಿಂದ ವ್ಯಕ್ತವಾಗುತ್ತದೆ.									(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ